ಚಿತ್ರ: ಗಣೇಶ
ಸಾಹಿತ್ಯ: ರಾಮ್ ನಾರಾಯಣ್
ಸಂಗೀತ: ಮಣಿಕಂಠ ಕದ್ರಿ
ಗಾಯನ: ವಿ. ಪ್ರದೀಪ್ ಕುಮಾರ್

ಹಸಿರಿನ ತಂಪಲಿ
ಒಲವಿನ ಮರದಲಿ
ಎಲೆಗಳ ಮಡಿಲಲಿ
ಚಿಲಿ-ಪಿಲಿ ಗಿಳಿಗಳು ಗೂಡಲಿ

ಸೊನೆಯ ಸದ್ದಿನಲ್ಲಿ
ಪ್ರೀತಿಯ ಕಲರವ ಅಲ್ಲಿ
ತಮ್ಮದೆ ಲೋಕದಲ್ಲಿ 
ಪ್ರೀತಿಸುತ ಇಹುದಿಲ್ಲಿ
ಚಂದದಿ ಬಾಳುತಿರುವಾಗ
ಆ ವಿಧಿ ಅಲ್ಲಿ ಬಂದಾಗ!

ಹಸಿರಿನ ತಂಪಲಿ
ಒಲವಿನ ಮರದಲಿ ..

ಗೂಡಿನಲ್ಲಿ ಇರಿಸಿ ಸಂಗಾತಿಯ
ಕಾಡಿಗಾಗಿ ಹೊರಟು ನಿಂತ ಇನಿಯ
ಸರಿ ಸಮಯವು ಕಾಯುತ
ಗರುಡ ಹಾರುತ ..
ಒಂಟಿ ಹಕ್ಕಿಯ
ದಿನವು ಕಾಡುತ ..
ಗಿಳಿ ಮನಸನು ಬಗೆ ಹರಡುತ
ಬಯಸುತಲಿದೆ..

ಹಸಿರಿನ ತಂಪಲಿ
ಒಲವಿನ ಮರದಲಿ ..

ಹಾರಿ ಬಂದ ಗರುಡನು ದಾನವ
ಜೋಡಿ ಹಕ್ಕಿ ತಿಳಿಕೊಂಡು ನಿಜವ
ತೊರೆದು ಗಿಳಿಗಳು ಗೂಡನು
ಕಾಡಿಗೊದವು ..
ಸೂರು ಹುಡುಕುತ ಚದುರಿ ಹೋದವು
ಅಲೆಯುತಲಿದೆ ಹರಸುತ ಮನ
ಗಿಳಿಗಳು ದಿನ ..

ಹಸಿರಿನ ತಂಪಲಿ
ಒಲವಿನ ಮರದಲಿ
ಎಲೆಗಳ ಮಡಿಲಲಿ
ಚಿಲಿ-ಪಿಲಿ ಗಿಳಿಗಳು ಗೂಡಲಿ

ಸೊನೆಯ ಸದ್ದಿನಲ್ಲಿ
ಪ್ರೀತಿಯ ಕಲರವ ಅಲ್ಲಿ
ಯಾವುದೆ ಗೋಜಿಗೂಗದೆ ಮನಸು
ಪ್ರೀತಿಸುತ ಇಹುದಿಲ್ಲಿ 
ಚಂದದಿ ಬಾಳುತಿರುವಾಗ
ಆ ವಿಧಿ ಅಲ್ಲಿ ಬಂದಾಗ!

Category: ಕನ್ನಡ ಚಿತ್ರಸಾಹಿತ್ಯ
Category: ಗಣೇಶ ಚಿತ್ರ
Category: ರಾಮ್ ನಾರಾಯಣ್ ಸಾಹಿತ್ಯ
ವರ್ಗ: ವಿ. ಪ್ರದೀಪ್ ಕುಮಾರ್ ಗಾಯನ